ಮುಖಪುಟ

ಕೋಲಾರ ಜಿಲ್ಲೆಯಲ್ಲಿ ಕೆ.ಜಿ.ಎಫ್. ನಗರವು ಒಂದು ಪ್ರಮುಖ ನಗರವಾಗಿದ್ದು, ಬಂಗಾರಪೇಟೆ ತಾಲ್ಲೂಕಿನಲ್ಲಿದೆ. 2011 ನೇ ಜನಗಣತಿಯ ಪ್ರಕಾರ ಕೆ.ಜಿ.ಎಫ್. ನಗರದ ಜನ ಸಂಖ್ಯೆ 1,62,230 ಆಗಿರುತ್ತದೆ, ಸ್ಥಳೀಯ ಯೋಜನಾ ಪ್ರದೇಶದ ಜನ ಸಂಖ್ಯೆ 2,67,183 ಆಗಿರುತ್ತದೆ. ನಗರದ ಆಡಳಿತವನ್ನು ರಾಬರ್ಟ್‍ಸನ್‍ಪೇಟೆ ನಗರ ಸಭೆಯು ನೋಡಿಕೊಳ್ಳುತ್ತಿದೆ. ನಗರದ ಯೋಜನಾ ಬದ್ದ ಬೆಳವಣಿಗೆಯನ್ನು ನೋಡಿಕೊಳ್ಳಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರನ್ವಯ ಕೆ.ಜಿ.ಎಫ್. ನಗರಾಭಿವೃದ್ಧಿ ಪ್ರಾಧಿಕಾರವನ್ನು 1988 ರಲ್ಲಿ ರಚಿಸಲಾಗಿದ್ದು, ಹಾಲಿ ಕಾರ್ಯ ನಿರ್ವಹಿಸುತ್ತಿದೆ. ಕೆ.ಜಿ.ಎಫ್. ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವಿಸ್ತೀರ್ಣ ಸುಮಾರು 216 ಚ.ಕಿ.ಮೀ. ಗಳಾಗಿರುತ್ತದೆ.